Sri Tulasi Jaya Tulasi Song Lyrics In Kannada
Song: Sri Tulasi Jaya Tulasi
Singer: Unknown
Lyrics: Unknown
Music: Unknown
Sri Tulasi Jaya Tulasi Song Lyrics In Kannada
ಶ್ರೀ ತುಳಸಿ ಜಯ ತುಳಸಿ ಜಯ ಜಯ ಜಯ ತುಳಸಿ
ಶ್ರೀ ರಾಮ ವರ ತುಳಸಿ ಶ್ರೀ ಕೃಷ್ಣ ತುಳಸಿ ||
ನಿನ್ನ ಬೃಂದಾವನವೇ ವೈಕುಂಠ ಕೈಲಾಸ
ನಿನ್ನ ತೀರ್ಥವೇ ಸಕಲ ಪುಣ್ಯ ತೀರ್ಥ
ನಿನ್ನ ದರುಶನವೆಲ್ಲ ದೇವತಾ ದರುಶನವು
ನಿನ್ನ ಪೂಜೆಯೆ ಸಕಲ ದೇವತಾ ಪೂಜೆಯು ||
ಜಯ ಮಂಗಳಂ ತುಳಸಿ ಸರ್ವ ಮಂಗಳೆ ದೇವಿ
ಜಯ ಮಂಗಳಂ ತುಳಸಿ ಮುರಹರನ ರಮಣಿ
ಜಯ ಮಂಗಳಂ ತುಳಸಿ ಲೋಕ ಪಾವನ ಮೂರ್ತಿ
ಜಯ ಮಂಗಳಂ ತುಳಸಿ ಧೇನು ಕುಲ ದೇವಿ ||